ಚಾಮಲದೇವಿ
ಕಲ್ಯಾಣ ಚಾಳುಕ್ಯ 1ನೆಯ ಸೋಮೇಶ್ವರನ (1044-1068) ಪತ್ನಿಯರಲ್ಲೊಬ್ಬಳು. ಬರ್ಮನ ಮಗಳು. ಈಕೆಯ ಹೆಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬಲ್ಲಟ್ಟಿಗೆ ಗ್ರಾಮದ ಶಾಸನದಿಂದ ತಿಳಿದಿದೆ. ಈಕೆ ಕೃಷ್ಣಾ-ತುಂಗಭದ್ರಾ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಮಾಡಿ, ಪ¿Éಮಲೆ ಎಂಬ ನೆಲೆವೀಡಿನಲ್ಲಿದ್ದಾಗ ಭಾಸ್ಕರಶೆಟ್ಟಿ ಎಂಬಾತ ಭೂದಾನಮಾಡಿದನೆಂಬುದಷ್ಟೇ ಈ ಶಾಸನದ ಉಲ್ಲೇಖ.

ಹಾನಗಲ್ಲಿನಲ್ಲಿ ಸಾಮಂತನಾಗಿದ್ದ ಕದಂಬಕುಲದ ಇಮ್ಮಡಿ ತೈಲಪನ (ಸು. 1099-1299) ಪತ್ನಿಯ ಹೆಸರೂ ಚಾಮಲದೇವಿ.									(ಜಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ